ಪಾಠ- 1, ಊಟದ ಬುತ್ತಿ (പൊതിച്ചോറ്)
ಸಾರ್ ಈ ಹುಡುಗನ ಅಲ್ಲಿಟ್ಟಿದ್ದ ಊಟದ ಡಬ್ಬಿ ಕಾಣಿಸುತ್ತಿಲ್ಲ. ಎರಡನೇ ತರಗತಿಯ ಅಧ್ಯಾಪಕರು ಹೆಡ್ ಮಾಸ್ತರೊಡನೆ ಹೇಳಿದರು.ಮುಖ್ಯ ಶಿಕ್ಷಕರು ಬರೆಯುವುದನ್ನು ನಿಲ್ಲಿಸಿ ಮುಖವನ್ನು ಎತ್ತಿ ನೋಡಿದರು. ಆ ಬಾಲಕನ ಕೆನ್ನೆಯ ಬುಡದಲ್ಲಿ(ಮೇಲೆ) ಕಣ್ಣೀರಿನಿಂದಾದ ಗುರುತಿನ ಮೂಲಕ ಕಣ್ಣೀರಿನ ಹನಿಗಳು ಉರುಳಿ ಹೋಗುತ್ತಿರುವುದನ್ನು ಅವರು ಕಂಡರು. ಮಗುವಿನ ಬಾಡಿದ ಆ ಕೋಮಲವಾದ ಮುಖವನ್ನು ನೋಡುತ್ತಾ ಅವರೊಂದು ನಿಮಿಷ ಹಾಗೆ ಕುಳಿತರು.
ಊಟದ ಡಬ್ಬಿಯನ್ನು ಎಲ್ಲಿ ಇಟ್ಟಿದ್ದೀ . ಆ ಶಾಲೆಯ ಮುಖ್ಯ ಗುರುಗಳು ಕೇಳಿದರು.ಮಗು ಅಳುತ್ತಾ ಗದ್ಗದಿತನಾಗಿ ಹೇಳಿತು. ಆ ರೂಮಿನಲ್ಲಿ
ತರಗತಿಯ ಅಧ್ಯಾಪಕರು ಹೀಗೆ ವಿವರಿಸಿದರು. ಇವನು ದಿನವೂ ಊಟದ ಡಬ್ಬಿಳಿಡುವ ಸ್ಧಳದಲ್ಲಿಯೇ ಇಂದು ಇಟ್ಟದ್ದು. ಇವನೊಂದಿಗೆ ಮತ್ತೊಬ್ಬ ಹುಡುಗನೂ ತನ್ನ ಊಟದ ಡಬ್ಬಿಯನ್ನು ಅಲ್ಲೇ ಇಟ್ಟಿದ್ದನು. ಆ ಡಬ್ಬಿ ಅಲ್ಲೇ ಇತ್ತು.
ಆ ಕಡೆ ಎಲ್ಲಾ ನೋಡಿದೆಯಾ .