Friday, September 12, 2014

History of Kerala

ಕೇರಳ ಚರಿತ್ರೆ

ಇಂದಿನ ಕೇರಳ ಸಂಸ್ಥಾನವು ರೂಪುಗೊಂಡದ್ದು 1956 ರಲ್ಲಿ. ಇದಕ್ಕೂ ಮುಂಚೆ ಕೇರಳವು ನೆಲೆನಿಂತದ್ದು ಮಲಬಾರ್, ಕೊಚ್ಚಿ, ತಿರುವಿದಾಂಕೂರ್ ಎಂಬ ಈ ಮೂರು ಪ್ರತ್ಯೇಕವಾದ ರಾಜಕೀಯ ಘಟಕಗಳಾಗಿ. ಮಲಯಾಳ ಭಾಷೆಯ ಆಧಾರದಲ್ಲಿ ಮಲಬಾರಿನಲ್ಲೂ ಕೊಚ್ಚಿಯಲ್ಲೂ, ತಿರುವಿದಾಂಕೂರಿನಲ್ಲೂ ಜನಗಳ ಮಧ್ಯೆ ರಾಜಕೀಯ ಘಟಕಗಳಿಗೆ ವ್ಯತಿರಿಕ್ತವಾದ ಹೇಗೆಂದು ನಿರೂಪಿಸಲಸಾಧ್ಯವಾದ ಒಂದು ಐಕ್ಯವಿತ್ತು. ಕೇರಳದಲ್ಲಿ ವಸಹಾತುಶಾಹಿಯ ಕಾಲದಲ್ಲಿ ಈ ಐಕ್ಯ ಭಾವನೆಯು ಇನ್ನೂ ಹೆಚ್ಚಾಗಿ ಬೆಳೆದು ನಿಂತಿತು. ಈ ಆಧಾರದಿಂದ ಆಧುನಿಕ ಕೇರಳದ ಚರಿತ್ರೆಯು, ಮತ್ತು ಚರಿತ್ರ ರಚನಾ ಶಾಸ್ತ್ರವೂ ವಾಸ್ತವವಾಗಿ ಆರಂಭವಾದದ್ದು  ಕೇರಳ ಸಂಸ್ಥಾನ ರೂಪುಗೊಂಡಾಗಿನಿಂದ ಎಂದು ಹೇಳಬಹುದು. ಎಂದರೆ ಮಲಯಾಳ ಮಾತನಾಡುವ ಜನರ ಚರಿತ್ರೆಯು ಅದಕ್ಕಿಂತ ನೂರಾರು ಶತಮಾದಷ್ಟು ಮುಂಚೆಯೇ ಆರಂಭಗೊಂಡಿತ್ತು. ಆದ್ದರಿಂದ ಕೇರಳ ಚರಿತ್ರೆಯ ಮತ್ತು ಚರಿತ್ರರಚನಾ ಶಾಸ್ತ್ರದ ಬೇರುಗಳು ಭೂತಕಾಲಕ್ಕೆ ಹರಡಿಕೊಂಡಿವೆ.

ಕೇರಳದ ಸಮಗ್ರವಾದ ಚರಿತ್ರೆಯು ರಚನೆಯಾಗಲು ಅರಂಭವಾಗುವುದಕ್ಕೂ ಮುಂಚೆ  ಮಲಬಾರಿನ, ಮತ್ತು ಕೊಚ್ಚಿಯ ಮತ್ತು ತಿರುವಿದಾಂಕೂರಿನ ಪ್ರಾದೇಶಿಕವಾದ ಇತಿಹಾಸ ನಿರ್ಮಾಣವು ಹತ್ತೊಂಬತ್ತನೇ ಶತಮಾನದ ಕಡೆಯ ದಶಕಗಳಲ್ಲಿಯೇ ಆರಂಭವಾಗಿತ್ತು. ಈ  ರೀತಿಯ ಇತಿಹಾಸ ರಚಗಳಲ್ಲಿ ಹಲವು ಅಂದು ನೆಲೆಯಲಿದ್ದ ಭೂಗೋಳಶಾಸ್ತ್ರ ಪರವಾದ ಮತ್ತು ರಾಜಕೀಯ ಪರವಾದ ಮಿತಿಗಳನ್ನು ಮೀರುವಂತಹವುಗಳಾಗಿವೆ. ಒಂದು ಪರಿಧಿಯವರಗೆ ಈ ರಚನೆಗಳನ್ನು ಹತ್ತೊಂಬತ್ತನೇ ಶತಮಾನದಲ್ಲಿ ಯುರೋಪಿಯನ್ ಚರಿತ್ರ ರಚನಾ ಶಾಸ್ತ್ರ ಪದ್ಧತಿಯಲ್ಲಿ ಉಂಟಾದ ಬದಲಾವಣೆಗಳ ಭಾಗವಾಗಿ, ಮುನ್ನಡೆದ ಪರಿಶ್ರಮಗಳ ಫಲವಾಗಿ ಗಣನೆಗೆ ತೆಗೆದುಕೊಳ್ಳಹುದು.

Friday, November 15, 2013

An Intermidiate Course Reader in Malayalam - B.Syamala Kumari

ಪಾಠ - 1   ಕೇರಳ

                ಮಲಯಾಳಿಗಳ ಜನ್ಮ ಸ್ಥಾನವಾಗಿದೆ ಕೇರಳ. 15 ಸಾವಿರ  ಚದುರ ಮೈಲ್ ಮಾತ್ರ ವಿಸ್ತೀರ್ಣವುಳ್ಳ ಈ ಚಿಕ್ಕ ರಾಜ್ಯವು(ಸಂಸ್ಥಾನವು) ಭಾರತದ ದಕ್ಷಿಣ-ಪಶ್ಚಿಮ ಮೂಲೆಯಲ್ಲಿ ನೆಲೆ ನಿಂತಿದೆ .  ಸಹ್ಯಾದ್ರಿ ಪರ್ವತದ  ಮತ್ತು ಅರಬ್ಬಿ ಕಡಲಿನ  ಮಧ್ಯೆ ಇರುವ ಕೇರಳವು ಪ್ರಕೃತಿ ಸುಂದರವಾಗಿದೆ. ಪೂರ್ವ ಬಾಗದಲ್ಲಿ ಚಿನ್ನಾಗಿ ಬೆಳೆದಿರುವ ಕಗ್ಗಾಡುಗಳೂ ಪಶ್ಚಿಮಕ್ಕೆ ಬೋರ್ಗರೆಯುತ್ತಿರುವ ಅರಬ್ಬಿ ಸಮುದ್ರವೂ, ಮಧ್ಯಭಾಗದಲ್ಲಿ ನದಿಗಳೂ, ಸರೋವರಗಳೂ, ಜಲಪಾತಗಳೂ/ಝರಿಗಳೂ, ಕಾಲುವೆಗಳೂ, ಹಳ್ಳಿಗಳೂ, ಪಟ್ಟಣಗಳೂ, ಬತ್ತದ ಬಯಲುಗಳೂ, ತೆಂಗಿನ ತೋಪುಗಳೂ, ತುಂಬಿದ ಈ ಭೂ ವಿಭಾಗವು ಸಂಚಾರಿಗಳ ಸ್ವರ್ಗವಾಗಿದೆ. ನಾಡುಗಾರರಿಗೆ ಅಭಿಮಾನವಾಗಿದೆ.

                   ಎರಡು ದೊಡ್ಡ ಪ್ರಕೃತಿಶಕ್ತಿಗಳ ಮಧ್ಯದಲ್ಲಿ ನಿಂತಿರುವ  ಈ ಕೇರಳವನ್ನು ಭೂಗೋಳಶಾಸ್ತ್ರವನ್ನನುಸರಿಸಿ ಮಲನಾಡು, ಒಳನಾಡು, ಸಮತಲ ಪ್ರದೇಶ, ಎಂದು ಮೂರು ವಿಭಾಗಗಳಾಗಿ ವಿಭಾಗಿಸಬಹುದು. ಮಲನಾಡಿನಲ್ಲಿ ರಬ್ಬರ್, ಟಿ, ಕಾಫೀ, ಏಲಕ್ಕಿ, ಎಂಬಿವುಗಳ ಕೃಷಿಯನ್ನು ಮಾಡುತ್ತಾರೆ. ಒಳನಾಡಿಗೆ ಸಂಬಂದಿಸಿದಂತೆ ಪ್ರಾಧಾನ ಬೆಳೆಗಳು ಶೂಠಿಯೂ, ಹರಿಶಿನವೂ, ಕರಿಮೆಣಸು, ಮತ್ತು ಗೆಣಸುಗಳಾಗಿವೆ. ಸಮತಲದಲ್ಲಿ ತಂಗು, ಭತ್ತವಾಗಿದೆ ಕೃಷಿ ಮಾಡುವಂತಗದ್ದು. ಕೇರಳಕ್ಕೆ ಸಂಬಂಧಿಸಿದ ಸುಗಂಧದ್ರವ್ಯಗಳು ತಂಬ ಪ್ರಾಚೀನಕಾಲದಿಂದಲೂ ವಿದೇಶೀಯರನ್ನು ಆಕರ್ಷಿಸಿವೆ. ಯವನರೂ, ಅರಬಿಗಳೂ, ಚೀನೀಯರಾದವರೊಂದಿಗೆ ಕೇರಳಿಯರಿಗೆ  ವಾಣಿಜ್ಯಸಂಬಂಧವು ಇತ್ತು.  ಭಾರತದ ಪಶ್ಚಿಮ ತೀರದಲ್ಲಿ ಮೊಟ್ಟಮೊದಲನೆಯದಾಗಿ ಪಾಶ್ಚಾತ್ಯನಾಡುಗಳೊಂದಿಗೆ  ಸಂಬಂಧವನ್ನು ಸ್ಥಾಪಿಸಿದ್ದು ಕೂಡ ಈ ನಾಡುಕಾರರಾಗಿದ್ದಾರೆ.

          .



Monday, August 5, 2013

AN INTESIVE COURSE IN MALAYALAM

നാനു മലയാളം വിദ്യാര്ഥി

(സൂചനാ : മാലയാള ഭാഷയെ പോലെ കാന്നഡയില് വാക്കുകളുടെ മധ്യത്തില് വരുന്ന          ക, ച, ട, ത, പ എന്നീ വര്ണംഗളെ ഗ, ജ, ഡ, ധ, ഭ എന്ന ഉച്ചരിക്കരുത്)


അദ്യാപക : ഇദു മലയാളം തരഗതി
           നാനു മലയാളം അദ്യാപക
           നന്ന ഹെസരു മാധവന് പിള്ള എംദു
           നീവു യാരു
വിദ്യാര്ഥി : നാനു മലയാളം വിദ്യാര്ഥി
അധ്യാപക : നീമ്മ ഹെസരേനു ?
വിദ്യാര്ഥി : നന്ന ഹെസരു മോഹന് ലാല് എംദു
അധ്യാപക : ഇചരു യാരു ?
വിദ്യാര്ഥി : ഇവരു ശ്രീ ജയപാല് സാവു
           സാര് അവരു യാരു ?

അധ്യാപക : അവരു കന്നഡ അദ്യാപകരാദ ശ്രീ രാമരാവു.
            മോഹന് ഇവരു യാരു ?
വിദ്യാരഥി :  ഇവരു തമിള് വിദ്യാര്ഥിനി കല
വിദ്യാര്ഥിനി : അവരു യാരു സാര് ?
അധ്യാപകന് : അവരു തമിള് അധ്യാപികാ ശ്രീമതി ശാരദാമണി.
വിദ്യാര്ഥിനി : സാര് തമിള് തരഗതി യാവുദു ?
അധ്യാപകന് : തമിള് തരഗതി അദു ?

       (കന്നഡയില് അദ്ദേഹം, ഇദ്ദേഹം ഇന്ന പദത്തിന് പകരമായി 
        അവരു, ഇവരു എന്ന തന്ന പ്രയോഗം ഉള്ളതാണ്)




Sunday, June 2, 2013

ADVANCE COURSE READER(മലയാള സാഹിത്യ ദര്പ്പണം) - V.Saratchandra Nair

ಪಾಠ- 1, ಊಟದ ಬುತ್ತಿ (പൊതിച്ചോറ്)
                  ಸಾರ್ ಈ ಹುಡುಗನ ಅಲ್ಲಿಟ್ಟಿದ್ದ ಊಟದ ಡಬ್ಬಿ ಕಾಣಿಸುತ್ತಿಲ್ಲ. ಎರಡನೇ ತರಗತಿಯ ಅಧ್ಯಾಪಕರು ಹೆಡ್ ಮಾಸ್ತರೊಡನೆ ಹೇಳಿದರು.
          ಮುಖ್ಯ ಶಿಕ್ಷಕರು ಬರೆಯುವುದನ್ನು ನಿಲ್ಲಿಸಿ ಮುಖವನ್ನು ಎತ್ತಿ ನೋಡಿದರು. ಆ  ಬಾಲಕನ ಕೆನ್ನೆಯ ಬುಡದಲ್ಲಿ(ಮೇಲೆ) ಕಣ್ಣೀರಿನಿಂದಾದ ಗುರುತಿನ ಮೂಲಕ ಕಣ್ಣೀರಿನ ಹನಿಗಳು ಉರುಳಿ ಹೋಗುತ್ತಿರುವುದನ್ನು ಅವರು ಕಂಡರು. ಮಗುವಿನ ಬಾಡಿದ ಆ ಕೋಮಲವಾದ ಮುಖವನ್ನು ನೋಡುತ್ತಾ ಅವರೊಂದು ನಿಮಿಷ ಹಾಗೆ ಕುಳಿತರು.
                ಊಟದ ಡಬ್ಬಿಯನ್ನು ಎಲ್ಲಿ ಇಟ್ಟಿದ್ದೀ . ಆ ಶಾಲೆಯ ಮುಖ್ಯ ಗುರುಗಳು ಕೇಳಿದರು.ಮಗು ಅಳುತ್ತಾ ಗದ್ಗದಿತನಾಗಿ ಹೇಳಿತು. ಆ ರೂಮಿನಲ್ಲಿ
                 ತರಗತಿಯ ಅಧ್ಯಾಪಕರು ಹೀಗೆ ವಿವರಿಸಿದರು. ಇವನು ದಿನವೂ ಊಟದ ಡಬ್ಬಿಳಿಡುವ ಸ್ಧಳದಲ್ಲಿಯೇ ಇಂದು ಇಟ್ಟದ್ದು. ಇವನೊಂದಿಗೆ ಮತ್ತೊಬ್ಬ ಹುಡುಗನೂ ತನ್ನ ಊಟದ ಡಬ್ಬಿಯನ್ನು ಅಲ್ಲೇ ಇಟ್ಟಿದ್ದನು. ಆ ಡಬ್ಬಿ ಅಲ್ಲೇ ಇತ್ತು.
                 ಆ ಕಡೆ ಎಲ್ಲಾ ನೋಡಿದೆಯಾ .